ಲಾಲ್ಬಿಯಕ್ತಂಗ ಮಿಜೋರಾಂನ ಪತ್ರಕರ್ತ. ಮಿಜೋರಾಂ ಜರ್ನಲಿಸ್ಟ್ ಅಸೋಸಿಯೇಷನ್‌ನಿಂದ ಅವರು ಭಾರತದಲ್ಲಿ ಕೆಲಸ ಮಾಡುವ ಅತ್ಯಂತ ಹಿರಿಯ ಪತ್ರಕರ್ತ ಎಂದು ಘೋಷಿಸಸಲ್ಪಟ್ಟವರು. ಇವರು ೮ ನವೆಂಬರ್ ೨೦೨೧ ರಂದು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. == ವೃತ್ತಿ == ಲಾಲ್ಬಿಯಕ್ತಂಗ ಪಚುವು ೧೯೪೫ ರಲ್ಲಿ ಬ್ರಿಟಿಷ್ ಭಾರತೀಯ ಸೇನೆಯ ಅಸ್ಸಾಂ ರೆಜಿಮೆಂಟ್‌ಗೆ ಸೇರಿದರು. ಎರಡನೆ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷರಿಗಾಗಿ ಜಪಾನಿನ ಪಡೆಗಳ ವಿರುದ್ಧ ಹೋರಾಡಿದರು. ಅವರು ೧೯೫೩ ಜೋರಾಮ್ ಥುಪುವಾನ್ ಅವರೊಂದಿಗೆ ಪತ್ರಿಕೋದ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು 1970 ರಿಂದ ತಮ್ಮದೇ ಆದ ಸ್ಥಳೀಯ ದಿನಪತ್ರಿಕೆ 'ಝೋರಾಮ್ ' ಅನ್ನು ಪ್ರಾರಂಭಿಸಿದರು. == ಪ್ರಶಸ್ತಿಗಳು ಮತ್ತು ಗೌರವಗಳು == ಪದ್ಮಶ್ರೀ (೨೦೨೧) ಬರ್ಮಾ ಸ್ಟಾರ್ ಸ್ವಾತಂತ್ರ್ಯ ಪದಕ ಜೆ ಮತ್ತು ಕೆ ಪದಕ ಸೈನ್ಯ ಸೇವಾ ಪದಕ == ವೈಯಕ್ತಿಕ == ಲಾಲ್ಬಿಯಕ್ತಂಗ ಪಚುವು ಮಾರ್ಚ್ ೨೫, ೧೯೨೭ ರಂದು ಸೈಚಲ್ ಗ್ರಾಮದಲ್ಲಿ ಜನಿಸಿದರು. ಐಜ್ವಾಲ್‌ ಮಿಜೋರಾಂನಿಂದ ೮೦ ಕಿಮೀ ದೂರದಲ್ಲಿದೆ. ಅವರ ಪೋಷಕರು ಪು ಸತ್ಕುಂಗ ಮತ್ತು ಪೈ ಡೊಕುಂಗಿ. == ಉಲ್ಲೇಖಗಳು ==